Thursday, April 23, 2009

ಇದೊಂದು ಕಾನ, ಪ್ರೇಮ ಕಥೆ..!


ಹೌದು, ಇದು ಕಾನ ಪ್ರೇಮ ಕಥೆನೇ..

ಯಾಕೆ ಅನ್ನೊದು ನಿಮ್ಮ ಪ್ರಶ್ನೆಯಾದ್ರೆ ಉತ್ತರ ಮುಂದಿದೆ..

ದಾಂಡೇಲಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಬರುವ ದಟ್ಟ ಕಾಡಿನಲ್ಲಿ ಕವಳಾ ಗುಹೆ ಇದೆ. ಇಲ್ಲಿನ ಸ್ಥಳಿಯರು ಹೆಚ್ಚಾಗಿ ಗೌಳಿಗರು. ಹೀಗೆ ದನಕಾಯುವ ಕಾಯಕದಲ್ಲಿ ತೊಡಗಿಕೊಂಡ ಗೌಳಿ ಜನಾಂಗದ ಯುವ ಪ್ರೇಮಿಗಳ ಹೆಸರು ಸಂಗೀತಾ ಮತ್ತು ಕಿರಣ.

ಸಂಗೀತಾಳನ್ನ ಅತಿಯಾಗಿ ಪ್ರೀತಿಸುತ್ತಿದ್ದ ಕಿರಣ ಹೀಗೆ ದನ ಕಾಯಲು ಅರಣ್ಯಿ ಇಲಾಖೆ ಕಟ್ಟಿಸಿರುವ ವಾಚ್ ಟವರ್ ನ ಕಂಬದ ಮೇಲೆ ತನ್ನ ರಕ್ತದಿಂದ ಹೀಗೆ ಬರೆದಿದ್ದಾನೆ. ಅವನು ಶಾಲೆಗೆ ಹೋಗಿದ್ದು 3 ನೆಯ ತರಗತಿಯ ವರೆಗೆ ಮಾತ್ರ. ಹಾಗಾಗಿ ಈ ರೀತಿ ಬರೆದು ತನ್ನ ಕಾಡ ಬದುಕಿನ ಪ್ರೇಮಿಯನ್ನ ಓಲೈಸಿಕೊಂಡು ಸಧ್ಯದಲ್ಲೇ ಮಧುವೆಯು ಆಗಲಿದ್ದಾನಂತೆ.

ಹೇಗಿದೆ ಕಾನ ಪ್ರೇಮ ಕಥೆ.

Wednesday, April 22, 2009

ಹಿಡಿದ ಹಾವು ಬಿಟ್ಟಾಗ..


ಅಂದು ನಾಗರಪಂಚಮಿ. ಸಂಪ್ರದಾಯದಂತೆ ನಾಗರಕಲ್ಲಿಗೆ ಪೂಜೆ ಸಲ್ಲಿಸಿ ಮನೆಗೆ ಮರಳುವಷ್ಟರಲ್ಲಿ ಮನೆಯ ಆಳು ಹುಡುಗರು ಪ್ಲಾಸ್ಟಿಕ್ ಡಬ್ಬದಲ್ಲಿ ಅದೇನೋ ತುಂಬಿಕೊಂಡು ಕುತೂಹಲದಿಂದ ನೋಡುತ್ತಿದ್ದರು. ಎನು ಮಾಡ್ತಾ ಇದ್ದೀರೋ ಎಂದು ಬಂದು ನೋಡಿದರೆ ಒಂದು ಪುಟ್ಟ ಹಾವಿನ ಮರಿಯನ್ನ ಡಬ್ಬದಲ್ಲಿ ತುಂಬಿಟ್ಟಿದ್ದರು.

ಎನು ಮಾಡುತ್ತಿದ್ದೀರಾ? ಇಂದು ನಾಗರಪಂಚಮಿ ಹಾವು ಕಂಡರೆ ಕೈ ಮುಗಿಯೋದ ಬಿಟ್ಟು ಹಾವನ್ನ ಕೂಡಿ ?ಹಾಕಿದ್ದೀರಾ ಎಂದು ಗದರಿಸಿ ಡಬ್ಬವನ್ನ ತೆಗೆದುಕೊಂಡು ಮನೆಯ ಮೇಲಿನ ಕಾಡಿಗೆ ಹೋದೆ.

ಡಬ್ಬದಿಂದ ಬಿಟ್ಟ ತಕ್ಷಣ ತುಸು ಆಲೋಚಿಸಿದಂತೆ ನೋಡಿದ ಹಾವಿನ ಮರಿ ನಿದಾನವಾಗಿ ತೆವಳುತ್ತಾ ಪೊದೆಯ ಗಿಡಗಳಲ್ಲಿ ಮರೆಯಾಯಿತು. ವಿಷದಜಂತುವಾಗಿರಲಿ,ಅಮಾಯಕ ಮೊಲವಾಗಿರಲಿ. ಎರಡಕ್ಕೂ ಜೀವವಿದೆ. ಅದಕ್ಕೆ ಜೀವಿಸಲು ಹಕ್ಕು ಇದ್ದೇ ಇದೆ ಎಂದು ಆಲೋಚಿಸುತ್ತಾ ಮನೆಗೆ ಮರಳಿದೆ. ಒಂದು ಜೀವವನ್ನ ಉಳಿಸಿದೆನಲ್ಲಾ ಎಂಬ ಸಮಾಧಾನ ಮಾತ್ರ ನನ್ನಲ್ಲಿ ನೆಲೆಮಾಡಿತ್ತು.
ಸುಗಂಧ ಸೂಸುವ ಅಪರೂಪದ ಆಕಿಱಡ:

ಮರುಗುವ ಮರದ ಗೋಳ ಕೇಳು.




ಮೊನ್ನೆ ಅರಬೈಲ್ ಘಾಟನಲ್ಲಿ ಅಪಘಾತ ಆಯ್ತು.. ಒಬ್ಬನ ಕೈ ಮುರಿದು ರಸ್ತೆಯೆಲ್ಲಾ ರಕ್ತಮಯ. ನನ್ನಿಂದ ನೋಡೊಕಾಗ್ಲಿಲ್ಲ ಮಾರಾಯಾ...


ಒಂದು ಅಪಘಾತ ನಡೆದರೆ ಹೀಗೆ ಸಾಗುತ್ತದೆ ಮಾತುಗಳು. ಆದರೆ ಕಾಡಿನ ಮರಕ್ಕೆ ಅಪಘಾತ ಆದರೆ?..


ಕಂಡ ಕಂಡಲ್ಲಿ ಮೇಣಕ್ಕಾಗಿಯೋ.. ಅಥವಾ ಕತ್ತಿ ಹರಿತವುಂಟೋ ಪರೀಕ್ಷಿಸಲು! ಮರಕ್ಕೆ ಕಾವು ಹಾಕುವುದನ್ನ ಕಂಡಿದ್ದೇವೆ. ಮರಕ್ಕೂ ಜೀವವಿದೆ ಎನ್ನುವುದ ತಿಳಿದೂ ಕೂಡ ಮರದ ರಕ್ತ ನೋಡಿ ಪಾಪ.. ಅನ್ನಿಸೋದೇ ಇಲ್ಲ.


ಎಷ್ಟು ವಿಚಿತ್ರದ ಸಂಗತಿಯಲ್ವಾ?


ಮನುಶ್ಯನ ರಕ್ತಕ್ಕೆ ಬೆಲೆಯುಂಟು. ಮರದ ರಕ್ತಕ್ಕೆ ಬೆಲೆ ಎಲ್ಲಿದೆ?..

ಪಾಪ... ಅನ್ನಿಸಿದ ಆ ಗಳಿಗೆ..


ನಾನು ಹುಟ್ಟಾ ಪರಿಸರಪ್ರಿಯನಲ್ಲ. ಮೊದಲು ಚೇಷ್ಟೆಗಾಗಿಯೋ, ಹಕ್ಕಿ ಹೇಗಿರುತ್ತೇ ಅಂತ ಮುಟ್ಟಿ ನೋಡಲೆಂದೋ ಕಲ್ಲು ಬೀಸಿದ್ದುಂಟು! ಹಕ್ಕಿ ಅಪರೂಪಕ್ಕೊಮ್ಮೆ ಬಿದ್ದಿದ್ದುಂಟು!.ಅದೇನೆ ಇರಲಿ.. ನನ್ನ ಕೊನೆಗೂ ಬದಲಾಯಿಸಿದ್ದು ಒಂದು ಪುಟ್ಟ ಇಣಚಿ (ಅಳಿಲು) ಮರಿ.

ನಾನಂದು ಗೋವಾಕ್ಕೆ ಬೈಕಿನಲ್ಲಿ ಹೋಗುತ್ತಿದ್ದೆ. ಕ್ಯಾಸಲ್ ರಾಕ್ ನ ಹತ್ತಿರ ಹೋಗುತ್ತಿದ್ದಾಗ ನನ್ನ ಮುಂದೆ ಸಾಗುತ್ತಿದ್ದ ಬೈಕಿನ ಚಕ್ರಕ್ಕೆ ಅದೇನೋ ಸಿಕ್ಕಿ ಚಿವ್, ಅಂತಾ ಅರಚಿಕೊಂಡಂತಾಯಿತು. ಇಳಿದು ನೋಡಿದರೆ ಅದೊಂದು ಪುಟ್ಟ ಅಳಿಲ ಮರಿ ಅಂಗಾತ ಬಿದ್ದು ನರಳುತ್ತಿತ್ತು. ಹತ್ತಿರ ಹೋಗಿ ಪ್ರೀತಿಯಿಂದ ಕೈಗೆತ್ತಿಕೊಂಡೆ. ಗೆಳೆಯ ರಾಜು ಪೋಟೊ ತೆಗೆಯುತ್ತಿದ್ದ. ಆ ಅಳಿಲ ಮರಿಯ ನರಳಾಟ ಕಂಡ ದಿನವೇ ನಾನೊಂದು ನಿಧಾರಕ್ಕೆ ಬಂದೆ.

ಪ್ರಾಣಿ ಹಿಂಸೆ ಮಾಡಬಾರದೆಂಬ ಅರಿವು ತಂತಾನೇ ನನ್ನಲ್ಲಿ ಮೂಡಿಹೋಯಿತು.

Tuesday, April 21, 2009














ಕಾಡಿನ ಹಣ್ಣುಗಳು:
ಜೋಯಿಡಾ ಕಾಡು ಹಣ್ಣುಗಳಿಗೆ ಹೆಸರುವಾಸಿ. ಇಲ್ಲಿ ಕರಿ ಮುಳ್ಳೇಹಣ್ಣು, ಬಿಳಿ ಮುಳ್ಳೇಹಣ್ಣು, ಮಜ್ಜಿಗೆ ಹಣ್ಣು, ಹಲಗೇರ ಹಣ್ಣು, ಹುಳಿ ಮಜ್ಜಿಗೆ ಹಣ್ಣು, ಬೆಟ್ಟದ ಕಾಫಿ, ಮುರುಗಲ ಹಣ್ಣು, ಸಂಪಿಗೆ ಹಣ್ಣು, ಕವಳಿ ಹಣ್ಣು, ಮೆಡ್ಡುಕಾ ಹಣ್ಣು, ನೇರಳೆ ಹಣ್ಣು, ಪೆಟ್ಲೆ ಹಣ್ಣು.




ಬಹುಷ್ಯಃ ಇದ್ಯಾವ ಹೆಸರನ್ನೂ ಹಲವರು ಕೇಳಿರಲಿಕ್ಕಿಲ್ಲ ( ಬಾಲಚಂದ್ರ ಹೆಗಡೆಯವರನ್ನು ಬಿಟ್ಟು!) ಇದು ಜೋಯಿಡಾ ತಾಲೂಕಿನಲ್ಲಿ ಕೆಲವು ಸೂಕ್ತ ಕಾಳದಲ್ಲಿ ಮಾತ್ರ ಹೇರಳವಾಗಿ ದೊರಕಬಹುದಾದ ಹಣ್ಣುಗಳು.




ಈ ಹಣ್ಣುಗಳ ಎಲ್ಲ ಚಿತ್ರಗಳನ್ನು ಕೆಲವೇ ದಿನಗಳಲ್ಲಿ ಈ ಬ್ಲಾಗ್ ನಲ್ಲಿ ನೀವು ನೋಡಬಹುದು.