Wednesday, April 22, 2009

ಪಾಪ... ಅನ್ನಿಸಿದ ಆ ಗಳಿಗೆ..


ನಾನು ಹುಟ್ಟಾ ಪರಿಸರಪ್ರಿಯನಲ್ಲ. ಮೊದಲು ಚೇಷ್ಟೆಗಾಗಿಯೋ, ಹಕ್ಕಿ ಹೇಗಿರುತ್ತೇ ಅಂತ ಮುಟ್ಟಿ ನೋಡಲೆಂದೋ ಕಲ್ಲು ಬೀಸಿದ್ದುಂಟು! ಹಕ್ಕಿ ಅಪರೂಪಕ್ಕೊಮ್ಮೆ ಬಿದ್ದಿದ್ದುಂಟು!.ಅದೇನೆ ಇರಲಿ.. ನನ್ನ ಕೊನೆಗೂ ಬದಲಾಯಿಸಿದ್ದು ಒಂದು ಪುಟ್ಟ ಇಣಚಿ (ಅಳಿಲು) ಮರಿ.

ನಾನಂದು ಗೋವಾಕ್ಕೆ ಬೈಕಿನಲ್ಲಿ ಹೋಗುತ್ತಿದ್ದೆ. ಕ್ಯಾಸಲ್ ರಾಕ್ ನ ಹತ್ತಿರ ಹೋಗುತ್ತಿದ್ದಾಗ ನನ್ನ ಮುಂದೆ ಸಾಗುತ್ತಿದ್ದ ಬೈಕಿನ ಚಕ್ರಕ್ಕೆ ಅದೇನೋ ಸಿಕ್ಕಿ ಚಿವ್, ಅಂತಾ ಅರಚಿಕೊಂಡಂತಾಯಿತು. ಇಳಿದು ನೋಡಿದರೆ ಅದೊಂದು ಪುಟ್ಟ ಅಳಿಲ ಮರಿ ಅಂಗಾತ ಬಿದ್ದು ನರಳುತ್ತಿತ್ತು. ಹತ್ತಿರ ಹೋಗಿ ಪ್ರೀತಿಯಿಂದ ಕೈಗೆತ್ತಿಕೊಂಡೆ. ಗೆಳೆಯ ರಾಜು ಪೋಟೊ ತೆಗೆಯುತ್ತಿದ್ದ. ಆ ಅಳಿಲ ಮರಿಯ ನರಳಾಟ ಕಂಡ ದಿನವೇ ನಾನೊಂದು ನಿಧಾರಕ್ಕೆ ಬಂದೆ.

ಪ್ರಾಣಿ ಹಿಂಸೆ ಮಾಡಬಾರದೆಂಬ ಅರಿವು ತಂತಾನೇ ನನ್ನಲ್ಲಿ ಮೂಡಿಹೋಯಿತು.

No comments: