
ಅಂದು ನಾಗರಪಂಚಮಿ. ಸಂಪ್ರದಾಯದಂತೆ ನಾಗರಕಲ್ಲಿಗೆ ಪೂಜೆ ಸಲ್ಲಿಸಿ ಮನೆಗೆ ಮರಳುವಷ್ಟರಲ್ಲಿ ಮನೆಯ ಆಳು ಹುಡುಗರು ಪ್ಲಾಸ್ಟಿಕ್ ಡಬ್ಬದಲ್ಲಿ ಅದೇನೋ ತುಂಬಿಕೊಂಡು ಕುತೂಹಲದಿಂದ ನೋಡುತ್ತಿದ್ದರು. ಎನು ಮಾಡ್ತಾ ಇದ್ದೀರೋ ಎಂದು ಬಂದು ನೋಡಿದರೆ ಒಂದು ಪುಟ್ಟ ಹಾವಿನ ಮರಿಯನ್ನ ಡಬ್ಬದಲ್ಲಿ ತುಂಬಿಟ್ಟಿದ್ದರು.
ಎನು ಮಾಡುತ್ತಿದ್ದೀರಾ? ಇಂದು ನಾಗರಪಂಚಮಿ ಹಾವು ಕಂಡರೆ ಕೈ ಮುಗಿಯೋದ ಬಿಟ್ಟು ಹಾವನ್ನ ಕೂಡಿ ?ಹಾಕಿದ್ದೀರಾ ಎಂದು ಗದರಿಸಿ ಡಬ್ಬವನ್ನ ತೆಗೆದುಕೊಂಡು ಮನೆಯ ಮೇಲಿನ ಕಾಡಿಗೆ ಹೋದೆ.
ಡಬ್ಬದಿಂದ ಬಿಟ್ಟ ತಕ್ಷಣ ತುಸು ಆಲೋಚಿಸಿದಂತೆ ನೋಡಿದ ಹಾವಿನ ಮರಿ ನಿದಾನವಾಗಿ ತೆವಳುತ್ತಾ ಪೊದೆಯ ಗಿಡಗಳಲ್ಲಿ ಮರೆಯಾಯಿತು. ವಿಷದಜಂತುವಾಗಿರಲಿ,ಅಮಾಯಕ ಮೊಲವಾಗಿರಲಿ. ಎರಡಕ್ಕೂ ಜೀವವಿದೆ. ಅದಕ್ಕೆ ಜೀವಿಸಲು ಹಕ್ಕು ಇದ್ದೇ ಇದೆ ಎಂದು ಆಲೋಚಿಸುತ್ತಾ ಮನೆಗೆ ಮರಳಿದೆ. ಒಂದು ಜೀವವನ್ನ ಉಳಿಸಿದೆನಲ್ಲಾ ಎಂಬ ಸಮಾಧಾನ ಮಾತ್ರ ನನ್ನಲ್ಲಿ ನೆಲೆಮಾಡಿತ್ತು.
No comments:
Post a Comment