
ಹೌದು, ಇದು ಕಾನ ಪ್ರೇಮ ಕಥೆನೇ..
ಯಾಕೆ ಅನ್ನೊದು ನಿಮ್ಮ ಪ್ರಶ್ನೆಯಾದ್ರೆ ಉತ್ತರ ಮುಂದಿದೆ..
ದಾಂಡೇಲಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಬರುವ ದಟ್ಟ ಕಾಡಿನಲ್ಲಿ ಕವಳಾ ಗುಹೆ ಇದೆ. ಇಲ್ಲಿನ ಸ್ಥಳಿಯರು ಹೆಚ್ಚಾಗಿ ಗೌಳಿಗರು. ಹೀಗೆ ದನಕಾಯುವ ಕಾಯಕದಲ್ಲಿ ತೊಡಗಿಕೊಂಡ ಗೌಳಿ ಜನಾಂಗದ ಯುವ ಪ್ರೇಮಿಗಳ ಹೆಸರು ಸಂಗೀತಾ ಮತ್ತು ಕಿರಣ.
ಸಂಗೀತಾಳನ್ನ ಅತಿಯಾಗಿ ಪ್ರೀತಿಸುತ್ತಿದ್ದ ಕಿರಣ ಹೀಗೆ ದನ ಕಾಯಲು ಅರಣ್ಯಿ ಇಲಾಖೆ ಕಟ್ಟಿಸಿರುವ ವಾಚ್ ಟವರ್ ನ ಕಂಬದ ಮೇಲೆ ತನ್ನ ರಕ್ತದಿಂದ ಹೀಗೆ ಬರೆದಿದ್ದಾನೆ. ಅವನು ಶಾಲೆಗೆ ಹೋಗಿದ್ದು 3 ನೆಯ ತರಗತಿಯ ವರೆಗೆ ಮಾತ್ರ. ಹಾಗಾಗಿ ಈ ರೀತಿ ಬರೆದು ತನ್ನ ಕಾಡ ಬದುಕಿನ ಪ್ರೇಮಿಯನ್ನ ಓಲೈಸಿಕೊಂಡು ಸಧ್ಯದಲ್ಲೇ ಮಧುವೆಯು ಆಗಲಿದ್ದಾನಂತೆ.
ಹೇಗಿದೆ ಕಾನ ಪ್ರೇಮ ಕಥೆ.
2 comments:
ನಿಮ್ಮ ಬ್ಲಾಗ್ ನ ಚಿತ್ರಗಳು ಚೆನ್ನಾಗಿವೆ. ಶೀರ್ಷಿಕೆಯ ಹಿಂದಿರುವ ಚಿತ್ರ ನಿಮ್ಮೂರಿನದ್ದಿರಬಹುದು ಅಲ್ವಾ ?ಜೋಯಿಡಾ ಯಾವಾಗಲೂ ಕೌತುಕ ಹುಟ್ಟಿಸುವ ಊರು
ನಿಮ್ಮ ಬ್ಲಾಗ್ ನೋಡಿದೆ. ಚೆನ್ನಾಗಿದೆ . ಯಾಕೆ ನಿಲ್ಲಿಸಿದಿರಿ? ಮುಂದುವರೆಸಿ
Post a Comment